First we have to get information about the patient with any ID proof, after we will do primary health checkup, then as per doctor advise we will take admission, with give information about rules and regulations about centre and treatment plans to support persons or family of patient, and will start to treatment process.
ಪ್ರಸ್ತುತ ದಿನಗಳಲ್ಲಿ ಯಾವುದೆ ವಿಚಾರ ವಿಷಯಗಳು ಬಹು ಬೇಗನೆ ವ್ಯಕ್ತಿಯಿಂದ ವ್ಯಕ್ತಿಗೆ ತಲುಪುತ್ತದೆ ಕಾರಣ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಇತ್ಯಾದಿ.
ಅದೇ ರೀತಿ ನಮ್ಮ ಚಿಕಿತ್ಸೆಯ ವಿಚಾರದಲ್ಲು ಈ ಒಂದು ಕೋವಿಡ್ ಅಂತ ಸಂದರ್ಭಗಳಲ್ಲಿ ವ್ಯಸನಿಯು ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಚಿಕಿತ್ಸೆ ಆಪ್ತಸಲಹೆ, ಪಡೆದುಕೊಳ್ಳಲು ಸಾಧುವಾಗುತ್ತಿಲ್ಲ ಹಾಗೂ ನಮ್ಮ ಸಂಸ್ಥೆಯ ವತಿಯಿಂದಲೂ ಕೂಡ ವ್ಯಸನಿಯನ್ನು ಗುರುತಿಸಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗೇ ವ್ಯಸನಿಯನ್ನು ನೇರವಾಗಿ ಭೇಟಿ ಮಾಡಿ ಚಿಕಿತ್ಸೆ, ಆಪ್ತಸಮಾಲೋಚನೆ, ಫಾಲೋಅಪ್ ಮುಂತಾದ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗುತಿಲ್ಲವಾದ ಕಾರಣ ಅಂತರ್ಜಾಲದ ಮುಖಾಂತರ ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳ ಮುಖಾಂತರ ನಮ್ಮ ಚಿಕಿತ್ಸೆಗೆ ಸಂಬಂಧಪಟ್ಟಂತಹ ಚುಟುವಟಿಕೆಗಳನ್ನು ಪ್ರಾರಂಬಿಸಲು ಉಪಯುಕ್ತವಾಗಿವೆ.
ವೀಡಿಯೋ ಸಂವಾದಗಳ ಮುಖಾಂತರ ವ್ಯಸನಿಗಳಿಗೆ ಆಪ್ತಸಮಾಲೋಚನೆ, ಕುಟುಂಬ ಆಪ್ತಸಮಾಲೋಚನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಹಾಗೂ ವ್ಯಸನದಿಂದ ಮುಕ್ತಿಹೊಂದಿದ ಫಲಾನುಭವಿಗಳಿಗೂ ಸಹ ಆಪ್ತಸಮಾಲೋಚನೆ, ಫಾಲೋಅಪ್ ಚಟುವಟಿಕೆಯನ್ನು ಹಮ್ಮಿಕೊಂಡದ್ದೇವೆ, ಹಾಗೂ ಪ್ರತೀ ತಿಂಗಳು 4 ನೇ ಶನಿವಾರ ಅನಾಮಿಕ ಅಮಲು ರೋಗಿಗಳ ಸಭೆಯನ್ನು ಸಹ ಹಮ್ಮಿಕೊಂಡಿದ್ದೇವೆ.
ಇತರೆ ಸಾಮಾಜಿಕ ಜಾಲಾತಾಣಗಳಾದ ವ್ಯಾಟ್ಸಪ್, ಪೇಸ್ಬುಕ್, ಟ್ವಿಟರ್ ಇತ್ಯಾದಿ, ಇವುಗಳ ಮುಕಾಂತರ ವ್ಯಸನಕ್ಕೆ ಸಂಧಿಸಿದಂತೆ ಸ್ಪೂರ್ತಿದಾಯಕ ವಿಡಿಯೋಗಳನ್ನು ವಿಕ್ಷಣೆಮಾಡುವ ಮೂಲಕ ವ್ಯಸನಿಗಳಿಗೆ ವ್ಯಸನದಿಂದ ಹೊರಬಲು ಸಹಾಯ ಮಾಡಲಾಗುತಿದ್ತೆ.
ಹೀಗೆ ನಮ್ಮ ಸಂಸ್ಥೆಯು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಅಂತರ್ಜಾಲದಲ್ಲಿ ಸದಾ ಸಕ್ರಿಯವಾಗಿದ್ದು ವ್ಯಸನಿಗಳನ್ನು ಸಂಪರ್ಕಿಸಲಾಗುತ್ತಿದೆ.